ಸೌರ ಶಕ್ತಿ
 	ಸೂರ್ಯಗರ್ಭದಲ್ಲಿ ನಿಹಿತವಾಗಿರುವ ಅಗಾಧ ಸಂಮರ್ದ ಮತ್ತು ಉಷ್ಣತೆಗಳ ಕಾರಣವಾಗಿ ಬೈಜಿಕ ಸಂಲಯನ ಕ್ರಿಯೆಗಳು ಸಂಭವಿಸುತ್ತಿರುವುವು. ಆಗ ಹೈಡ್ರೊಜನ್ ಬೀಜಗಳು ಬೆಸೆಯಲ್ಪಟ್ವು ಹೀಲಿಯಮ್ ಬೀಜಗಳು ಮೈದಳೆಯುತ್ತವೆ. ಈ ದ್ರವ್ಯಾಂತರಣ (ಟಾನ್ಸ್‍ಮ್ಯುಟೇಶನ್) ಪ್ರಕ್ರಿಯಗಳಲ್ಲಿ ಒಂದಿಷ್ಟು ರಾಶಿ (m) ನಷ್ಟವಾಗತ್ತದೆ. ವಿನಷ್ಯ ರಾಶಿ ಇ=mಛಿ2 ಸಮೀಕರಣದ ಪ್ರಕಾರ ಶಕ್ತಿಯಾಗಿ (ಇ) ಹೊರಹೊಮ್ಮುತ್ತದೆ. ಇಲ್ಲಿ ಛಿ ಬೆಳಕಿನ ಸ್ಥಿರವೇಗ. ಇದೇ ಸೌರಶಕ್ತಿ. ಹೀಲಿಯಮ್ ಬೀಜಗಳು ಸೂರ್ಯನಲ್ಲೇ ಜಮೆಗೊಳ್ಳುತ್ತವೆ. ಭೂಮಿಗೆ ಬರುತ್ತಿರುವ ಸೌರಶಕ್ತಿಯ ಒಟ್ಟು ಪ್ರಮಾಣ 1 ವರ್ಷದಲ್ಲಿ ಸುಮಾರು 4x1018 ಜೌಲ್‍ಗಳು.
(ನೋಡಿ- ನಕ್ಷತ್ರ-ಶಕ್ತಿ)

	ಸೌರ ಉಷ್ಣತೆ: ಹೊರಮೈ (ದ್ಯುತಿಗೋಳ) ಉಷ್ಣತೆ 6000ºಅ. ಒಳಗಿಳಿದಂತೆ ಉಷ್ಣತೆ ಅತಿಶಯವಾಗಿ ಏರುವುದು. ಅಂಥ ಅಧಿಕ ಉಷ್ಣತೆಯಲ್ಲಿ ಸಕಲ ವಸ್ತುಗಳೂ ಅನಿಲವಾಗಿಬಿಡುವುವು. ಎಂದೇ ಸೂರ್ಯ, ವ್ಯಾಪಕವಾಗಿ ಎಲ್ಲ ನಕ್ಷತ್ರಗಳೂ ಅನಿಲರೂಪಿಗಳು. ಸೂರ್ಯಕೇಂದ್ರದ ಉಷ್ಣತೆ 20,000,000º ಅ ಇರಬಹುದೆಂದು ಅಂದಾಜು.	
				*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ